Jan 10, 2015

Madaki Kaalina Palya

ಮಡಕಿಕಾಳು ಪಲ್ಯ
Moth bean, Haricot bean and Dew bean are the English names for Madaki Kaal. Its scientific name is Vigna aconitifolia. This legume is brown on the outside and white inside. It's similar to Greengram but slightly smaller. Madaki is a drought resistant, its commonly grown in arid and semi-arid regions of India. It is rich in protein and consumed in many forms- soaked, sprouted and cooked. Here we have a cooked dish commonly prepared in northern parts of Karnataka.

ಮಡಕಿಕಾಳು ಪಲ್ಯ ಮಾಡಲು ಬೇಕಾಗುವ ಸಾಮಗ್ರಿಗಳು; 
೧. ಮಡಕಿಕಾಳು
೨. ೧ ಈರುಳ್ಳಿ
೩. ೪ ಹಸಿ ಮೆಣಸಿನಕಾಯಿ
೩. ಕರಿಬೇವು
೪. ಕೋತಂಬರಿ
೫. ಅಡುಗೆ ಎಣ್ಣೆ ೨ ಚಮ್ಮಚ 
೬. ಸಾಸಿವೆ & ಜೀರಿಗೆ
೭. ರುಚಿಗೆ ತಕ್ಕಷ್ಟು ಉಪ್ಪು
ಮಡಕಿಕಾಳು ಪಲ್ಯ ಮಾಡುವ ವಿಧಾನ;
೧. ಮಡಕಿಕಾಳನ್ನು ಒಂದು ದಿನದವರೆಗೆ ನೆನೆಸಿಟ್ಟು ಮೊಳಕೆ ಒಡೆಸಬೇಕು.
೨. ಈರುಳ್ಳಿ-ಮೆಣಸಿನಕಾಯಿ ಸಣ್ಣಗೆ ಹೆಚ್ಚಿಕೊಳ್ಳಬೇಕು.
೩. ಒಂದು ಪಾತ್ರೆಯಲ್ಲಿ ೨ ಚಮ್ಮಚ ಎಣ್ಣೆ ಹಾಕಿ ಒಲೆಯ ಮೇಲೆ ಕಾಯಲು ಇಡಿ.
೪. ಕಾದ ಎಣ್ಣೆಯಲ್ಲಿ ಸಾಸಿವೆ-ಜೀರಿಗೆ, ಈರುಳ್ಳಿ-ಮೆಣಸಿನಕಾಯಿ, ಕರಿಬೇವು ಹಾಕಿ ಈರುಳ್ಳಿ ಕಂದು ಬಣ್ಣಕ್ಕೆ ತಿರುಗುವವರೆಗೆ ಬೇಯಲು ಬಿಡಿ.
೫. ನಂತರ ಅದರಲ್ಲಿ ಮೊಳಕೆ ಒಡೆದ ಮಡಕಿಕಾಳನ್ನು ಹಾಕಿ ಚೆನ್ನಾಗಿ ಕಲಸಿ. ಅದಕ್ಕೆ ಸ್ವಲ್ಪ ಉಪ್ಪು ಹಾಕಿ ಸ್ವಲ್ಪ ನೀರನ್ನು ಹಾಕಿ. 
೬. ನೀರು ಕೇವಲ ಉಪ್ಪು ಕರಗುವಸ್ಟು ಮಾತ್ರ ಹಾಕಬೇಕು. ೫-೭ ನಿಮಿಷ ಸಣ್ಣನೆ ಉರಿಯಲ್ಲಿ ಬೇಯಲು ಬಿಡಿ.
೭. ನಂತರ ಸಣ್ಣಗೆ ಹೆಚ್ಚಿದ ಕೋತಂಬರಿಯನ್ನು ಹಾಕಿ ಚೆನ್ನಾಗಿ ಕಲಸಿ. ಮಡಕಿಕಾಳು ಬೆಂದ ನಂತರ ಒಲೆಯನ್ನು ಆರಿಸಿ.
ಮಡಕಿಕಾಳು ಪಲ್ಯವನ್ನು ಸಜ್ಜಿ ರೊಟ್ಟಿಯೊಂದಿಗೆ, ಜೋಳದ ರೊಟ್ಟಿಯೊಂದಿಗೆ, ಚಪಾತಿಯೊಂದಿಗೂ ತಿನ್ನಬಹುದು.
.....



No comments:

Post a Comment