Nov 23, 2014

ಸಜ್ಜಿ ರೊಟ್ಟಿ ~ Sajji Rotti

ಸಜ್ಜಿ ರೊಟ್ಟಿ ಮಾಡುವ ವಿಧಾನ.
ಬೇಕಾಗುವ ಸಾಮಗ್ರಿಗಳು ;
೧. ಸಜ್ಜಿ ಹಿಟ್ಟು 
೨. ಬಿಳಿ ಎಳ್ಳು 
೩. ನೀರು

ಮಾಡುವ ವಿಧಾನ -
೧. ಒಂದು ಅಗಲವಾದ ಪಾತ್ರೆಯಲ್ಲಿ ಸಜ್ಜಿ ಹಿಟ್ಟನ್ನು ಹಾಕಿಕೊಳ್ಳಿ 
೨. ಒಂದು ಚಿಕ್ಕ ಪಾತ್ರೆಯಲ್ಲಿ ಒಂದು ಸಣ್ಣ ಕಪ್ ನೀರನ್ನು ಹಾಕಿ, ಬಿಸಿ ಮಾಡಲು ಒಲೆಯ ಮೇಲಿಡಿ.
೩. ನೀರು ಕುದಿಯುವವರೆಗೂ ಕಾದು ಆಮೇಲೆ ಆ ನೀರನ್ನು ಹಿಟ್ಟಿಗೆ ಹಾಕಿಕೊಳ್ಳಿ.
೪. ನಂತರ ಸ್ವಲ್ಪ ತಣ್ಣೀರನ್ನು ಬೆರೆಸಿ ಹಿಟ್ಟನ್ನು ಹದವಾಗಿ ನಾದಿಕೊಳ್ಳಿ. ಈ ಮಿಶ್ರಣವನ್ನು ತುಂಬಾ ಹೊತ್ತು ಬಿಡಬಾರದು. ಅದು ತನ್ನ ಜಿಗಟುತನವನ್ನು ಕಳೆದುಕೊಳ್ಳುವದೊರೊಳಗೆ ರೊಟ್ಟಿ ಮಾಡಬೇಕು.
Picture 1
೫. ನಾದಿದ ಹಿಟ್ಟಿಂದ ರೊಟ್ಟಿಯನ್ನು ದುಂಡಾಕಾರ ಬರುವಂತೆ ತಟ್ಟಿ. 
Picture 2
೬. ರೊಟ್ಟಿ ತೆಳ್ಳಗೆ ದೊಡ್ಡದಾದ ನಂತರ, ಬಿಳಿ ಎಳ್ಳನ್ನು ಅದರ ಮೇಲೆ ಉದುರಿಸಿ, ಅಂಟಿಕೊಳ್ಳುವಂತೆ ನಿಧಾನವಾಗಿ ಒತ್ತಬೇಕು.
Picture 3
೭. ರೊಟ್ಟಿಯನ್ನು ಕಾದ ಹಂಚಿಗೆ ಹಾಕಬೇಕು, ನಂತರ ರೊಟ್ಟಿಯ ಒಂದು ಮೈಗೆ ಹಸಿ ಬಟ್ಟೆಯಿಂದ (ಹತ್ತಿಬಟ್ಟೆ) ನೀರನ್ನು ಸವರಬೇಕು.
Picture 4
೮. ರೊಟ್ಟಿಯನ್ನು ತಿರುಗಿಸಿ ಹಾಕಿ, ಸಣ್ಣ ಉರಿಯಲ್ಲಿ ಬಿರುಸಾಗುವತನಕ ಬೇಯಿಸಬೇಕು.
Picture 5
೯. ಬೆಂದ ರೊಟ್ಟಿಯನ್ನು ಅಗಲವಾಗಿ ಹಾಸಿದ ಬಟ್ಟೆಯ ಮೇಲೆ ಆರಲು ಹಾಕಿ. ಕನಿಷ್ಟ ೧೫ ನಿಮಿಷ ಆರಲು ಬಿಡಿ. 
Picture 6
೧೦. ಆರಿದ ನಂತರ ರೊಟ್ಟಿಗಳನ್ನು ದೊಡ್ಡ ಡಬ್ಬಿಯಲ್ಲಿ ಹಾಕಿಡಬಹುದು. ಈ ರೊಟ್ಟಿಗಳನ್ನು ೩ ತಿಂಗಳವರೆಗೆ ಇಡಬಹುದು.
ಸಜ್ಜಿ ರೊಟ್ಟಿ ಆರಿದಮೇಲೆ ಮಡಕಿಕಾಳು ಪಲ್ಯ, ಅಗಸೀ ಚಟ್ನಿ ಮತ್ತು ಮೊಸರಿನ ಜೊತೆ ತಿಂದರೆ ರುಚಿ ಹೆಚ್ಚು.
Picture 7
How to make Sajji Rotti
Ingredients:
  • Black Millet flour
  • White Sesame seeds
  • Water
Steps:
  1. Take flour in a wide vessel. Pour a cup of hot water into the flour and knead it slowly. Mix cold water as and when required. Continue kneading until the dough is consistent. This dough dries quickly, start making rottis immediately. See picture 1.
  2. Take some dough and roll into a ball and then flatten it. Sprinkle some flour over the dough and tap it by both palms until it becomes a thin sheet. See picture 2.
  3. Sprinkle some sesame seeds and press lightly so that they get embedded. These seeds prevent the dough from puffing. See picture 3.
  4. Place the flattened dough over a heated pan (tava), flame should be medium. With a cotton cloth smear water and let it dry. Overturn the rotti and cook the other side. Reduce the flame to low and cook until the rotti turns crisp. See picture 4 and 5.
  5. Place the cooked rotti on a cotton cloth for cooling and drying. Let the rottis dry at least 15 minutes. Rottis stored in air tight boxes remain good for 3 months. See picture 6.
Sajji Rottis can be had with sprouted lentils (Moat in Hindi) dish and curd.
.........

1 comment: